ಡೆಲಗೋವ ಕೊಲ್ಲಿ
ಇದು ಆಗ್ನೇಯ ಆಫ್ರಿಕ ತೀರದ ಒಂದು ಕೊಲ್ಲಿ. ಮೋeóÁಂಬೀಕಿನ ಆಗ್ನೇಯ ತುದಿಯಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯದ ಗಡಿಯ ಬಳಿ, ಸ್ಥೂಲವಾಗಿ ದ.ಅ. 260ಯ ಮೇಲಿವೆ. ಹಿಂದೂಸಾಗರಕ್ಕೆ ಸೇರಿದ ಈ ಕೊಲ್ಲಿಯ ಉದ್ದ 19ಮೈ; ಅಗಲ 16 ಮೈ. ಯೂರೋಪಿಯನ್ ನಾವಿಕರು ಗೋವದಿಂದ ಹಿಂದಿರುಗುವಾಗ ಇಲ್ಲಿ ತಂಗಿ ಮುಂದುವರಿಯುತ್ತಿದ್ದುದರಿಂದ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗಿದೆಯಾದರೂ ಬೆಯಾ ದ ಲಗೂನ್ (ಲಗೂನಿನ ಕೊಲ್ಲಿ) ಎಂಬುದರಿಂದ ಬಹುಶಃ ಇದು ಬಂದಿರಬೇಕು ಎನ್ನಲಾಗಿದೆ.

	ಡೆಲಗೋವ ಕೊಲ್ಲಿಯ ದಕ್ಷಿಣ ತುದಿಯಲ್ಲಿ ಇನ್ಯಕ ಪರ್ಯಾಯದ್ವೀಪವೂ ಇನ್ಯಕ ದ್ವೀಪವೂ ಇವೆ. ಇನ್ಯಕ ದ್ವೀಪವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ದ್ವೀಪದ ಉತ್ತರದಲ್ಲಿ ಮರಳುದಿಣ್ಣೆಗಳು ಒಳಕೊಲ್ಲಿಯನ್ನು ಹಿಂದೂಸಾಗರದಿಂದ ಬೇರ್ಪಡಿಸಿವೆ. ಈ ಒಳಕೊಲ್ಲಿ 7 ಮೈ. ಉದ್ದ, 1 ಮೈ. ಅಗಲವಾಗಿದೆ. ಲೊರೆನ್ಸೊ ಮಾರ್ಕೆಸ್ ರೇವುಪಟ್ಟಣ ಇರುವುದು ಈ ಎಡೆಯಲ್ಲಿ. ಇದು ಮೋeóÁಂಬೀಕಿನ ಮುಖ್ಯಪಟ್ಟಣ. ಇದು ಪೂರ್ವ ಆಫ್ರಿಕದ ಪ್ರಮುಖ ರೇವುಪಟ್ಟಣಗಳಲ್ಲೊಂದು. ಮೋeóÁಂಬೀಕ್ ಮತ್ತು ಅದರ ಸುತ್ತಣ ಪ್ರದೇಶಗಳಿಂದ ಸರಕು ಇದರ ಮುಖಾಂತರ ಸಾಗುತ್ತದೆ. ಮಟೋಲ, ಟೆಂಬೆ ಮತ್ತು ಉಂಬೆಲೂಜಿû ನದಿಗಳ ನೀರು ಕೂಡಿ ಅಳಿವೆಯಾಗಿ ಪರಿಣಮಿಸಿ ಒಳಕೊಲ್ಲಿಯೊಳಕ್ಕೆ ಹರಿಯುತ್ತದೆ. ಮಪೂಟೋ ಮತ್ತು ಕಮಾಟೀ ನದಿಗಳು ಹೊರಕೊಲ್ಲಿಗೆ ಸೇರುತ್ತವೆ.

	ಡೆಲಗೋವ ಕೊಲ್ಲಿಯನ್ನು ಮೊಟ್ಟಮೊದಲಿಗೆ ಕಂಡ (1502) ಐರೋಪ್ಯ ಆಂಟಾನ್ಯೂಡೂ ಕಾಂಪೂ ಎಂಬ ಪೋರ್ಚುಗೀಸ್ ನಾವಿಕ. ಈತ ವ್ಯಾಸ್ಕೋಡಗ್ಯಾಮನ ಹಡಗಳಲ್ಲೊಂದರ ಕಪ್ತಾನನಾಗಿದ್ದ. 1544ರಲ್ಲಿ ಲೊರೆನ್ಸೊ ಮರ್ಕೇಷ್ ಎಂಬ ಪೋರ್ಚುಗೀಸ್ ವ್ಯಾಪಾರಿ ಇಲ್ಲಿ ಪರಿಶೋಧನೆ ನಡೆಸಿದ. ಅದೇ ವರ್ಷ ಪೋರ್ಚುಗೀಸರು ಈ ಕೊಲ್ಲಿಯ ಬಳಿಯ ಕಾಟಿಂಬೆಯ ಬಳಿ ಒಂದು ಕೋಟೆ ಕಟ್ಟಿದರು. ಗುಲಾಮರ ಮತ್ತು ದಂತದ ವ್ಯಾಪಾರದಲ್ಲಿ ನಿರತರಾದವರು ಹಡಗುಗಳಲ್ಲಿ ಇಲ್ಲಿಗೆ ಆಗಿಂದಾಗ್ಗೆ ಬರುತ್ತಿದ್ದರು. 1721-1730ರಲ್ಲಿ ಈ ಕೊಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿಯ ವಶದಲ್ಲಿತ್ತು. ಆದರೆ ಯಾವುದೇ ಯೂರೋಪಿಯನ್ ದೇಶ ಇದನ್ನು ಬಹುಕಾಲ ಆಕ್ರಮಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಇಲ್ಲಿಯ ವಾಯುಗುಣ ಅನಾರೋಗ್ಯಕರವಾಗಿದ್ದುದೂ ಆಗಿಂದಾಗ್ಗೆ ಕಡಲುಗಳ್ಳರೂ ಸ್ಥಳೀಯ ಜನಾಂಗಗಳೂ ಆಕ್ರಮಣ ನಡೆಸುತ್ತಿದ್ದುದೂ ಇದರ ಹಿನ್ನಾಡಿನೊಂದಿಗೆ ಸುಲಭವಾಗಿ ಸಂಪರ್ಕ ಸಾಧ್ಯವಾಗದಿದ್ದರೂ ಇದಕ್ಕೆ ಕಾರಣ. 1771ರಲ್ಲಿ ಆಸ್ಟ್ರಿಯನ್ ವ್ಯಾಪಾರ ಕಂಪನಿ ಈ ಕೊಲ್ಲಿಯ ಬಳಿ ತನ್ನ ವ್ಯಾಪಾರ ಸ್ಥಾಪಿಸಲು ಯತ್ನಿಸಿ ಪೋರ್ಚುಗೀಸರಿಂದ ಉಚ್ಫಾಟಿತವಾಯಿತು. 1823 ಮತ್ತು 1824ರಲ್ಲಿ ಬ್ರಿಟಿಷರೂ ಪೋರ್ಚುಗೀಸರೂ ಪರಸ್ಪರ ಸ್ಪರ್ಧೆಯಲ್ಲಿ ತೊಡಗಿ ಸುತ್ತಣ ಪ್ರದೇಶದ ಸ್ಥಳೀಯ ಮುಖಂಡರೊಂದಿಗೆ ಒಪ್ಪಂದ ಮಾಡಿಕೊಂಡರು. ಸ್ಪರ್ಧೆ ಬಹಕಾಲ ಮುಂದುವರಿಯಿತು. ಇದು ದಕ್ಷಿಣ ಆಫ್ರಿಕದ ಗಣಿಗಳಿಗೆ ಅತ್ಯಂತ ಹತ್ತಿರದ ಕೊಲ್ಲಿಯೆಂಬ ಕಾರಣದಿಂದ ಬ್ರಿಟಿಷರು ಇದರ ಹತೋಟಿಗಾಗಿ ಬಹಳ ಪ್ರಯತ್ನಪಟ್ಟರು. 1869ರಲ್ಲಿ ಟ್ರಾನ್ಸ್‍ವಾಲಿನ ಗಣರಾಜ್ಯ ಇದರ ಮೇಲೆ ಪೋರ್ಚುಗೀಸ್ ಪ್ರಭುತ್ವವನ್ನು ಮಾನ್ಯ ಮಾಡಿತು. ಇದರ ಒಡೆತನದ ವಿಚಾರದಲ್ಲಿ ಫ್ರೆಂಚ್ ಅಧ್ಯಕ್ಷ ನೀಡುವ ನಿರ್ಣಯಕ್ಕೆ ಬದ್ಧವಾಗಿರಲು ಪೋರ್ಚುಗೀಸರೂ ಬ್ರಿಟಿಷರೂ ಒಪ್ಪಿಕೊಂಡರು. ಅವನು 1875ರಲ್ಲಿ ಪೋರ್ಚುಗೀಸರ ಪರವಾಗಿ ನಿರ್ಣಯ ನೀಡಿದ.
(ಆರ್.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ